ಬಗ್ಗೆ

 

ಫಿನೋಲೆಕ್ಸ್  ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ ಗಳನ್ನು ಮಣ್ಣು, ತ್ಯಾಜ್ಯ ವಸ್ತು ಹಾಗೂ ಮಳೆಯ ನೀರಿನ ನಿರ್ವಹಣೆಗಾಗಿ ಬಳಸಲಾಗುವುದು. ಈ ಉತ್ಪಾದನೆಗಳು ಹಗುರ ಹಾಗೂ ಅನುಸ್ಥಾಪಿಸಲು ಸುಲಭ.  75 ಮಿ.ಮಿ. ನಿಂದ 16- ಮಿ. ಮಿ. ಪೈಪ್ಸ್ ಹಾಗೂ ಫಿಟ್ಟಿಂಗ್ ಗಳನ್ನು ನಾನ್ ಪ್ರೆಶರ್ ಪ್ಲಂಬಿಂಗ್ ವ್ಯವಸ್ಥೆಗಳಿಗೆ ಅಂದರೆ ಲೀಕೇಜ್ ರಹಿತ ತ್ಯಾಜ್ಯ ನೀಕನ್ನು ವಿಚಕಣೆಗೆ ಬಳಸಲಾಗುತ್ತದೆ. ಐ ಎಸ್ ಪ್ರಮಾಣಿತ ಅಂತರಾಷ್ಟ್ರೀಯ ಮಾನ್ಯತೆಯಿರುವ ಗುಣಮಟ್ಟಗಳಿಗನುಗುಣವಾಗಿ ಈ ಪೈಪ್ ಗಳನ್ನು ಉತ್ಪಾದಿಸಲಾಗಿದೆ. ಫಿನೋಲೆಕ್ಸ್ ಎಸ್ ಡಬ್ಲೂ ಆರ್ ಪೈಪ್ ಗಳು ಶೇಖರಣೆ ಆಗದೆ, ತುಕ್ಕು ಹಿಡಿಯದೆ, ಯಾವುದೆ ರಾಸಾಯನಿಕ ಪ್ರಕ್ರಿಯೆಗಳಿಂದ ಬಾಧಿಸದ್ದಾಗಿವೆ. ಈ ಪೈಪ್ ಗಳು ಬ್ಯಾಕ್ಟೀರಿಯಾ, ಫಂಗೈ, ಸೂಕ್ಷ್ಮ ಜೀವಿಗಳು, ರೋಡೆಂಟ್ ಮತ್ತು ಕೀಟಗಳ ಬಾಧೆಯನ್ನು ತಡೆಯುತ್ತವೆ.  ಪೈಪ್ ಗಳು ಐ ಎಸ್: 13592 ಮಾನ್ಯತೆಯ ಅನುಗುಣವಾಗಿ ಹಾಗೂ ಫಿಟ್ಟಿಂಗ್ ಗಳು ಐ ಎಸ್ 14735 ಮಾನ್ಯತೆಯ ಅನುಗುಣವಾಗಿ ಉತ್ಪಾದಿಸಲಾಗುತ್ತದೆ. ಫಿನೋಲೆಕ್ಸ್ ಎಸ್ ಡಬ್ಲೂ ಆರ್ ಪೈಪ್ಸ್ ಹಾಗೂ ಫಿಟ್ಟಿಂಗ್ ಗಳು ಸ್ಯಾನಿಟೇಶನ್ (ನೈರ್ಮಲ್ಯ) ಹಾಗೂ ಒಳ ಚರಂಡಿಯ ವ್ಯವಸ್ಥೆಗಳಿಗೆ ಶಾಶ್ವತ ಪರಿಹಾರವಾಗಿದೆ. ಹಾಗೂ ಮಾರ್ಕೆಟ್ ನಲ್ಲಿರುವ ತುಲನೆಯಲ್ಲಿ ವೆಚ್ಚದಲ್ಲೂ ಕಡಿಮೆ ಇದೆ.

 

ಫಿನೋಲೆಕ್ಸ್ ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ ಗಳನ್ನು ಒಂದು ಸಂಯೋಜಿತ ರಿಂಗ್ ಅಥವಾ ಸೋಲ್ವೆಂಟ್ ವೆಲ್ಡ್ ನ ಮೂಲಕ ಜೋಡಿಸಬಹುದು ಅಂದ್ರೆ ಸೆಲ್ಫಿಟ್ ಸಿಸ್ಟಮ್. ಎರಡು ಬೇರೆ ಬೇರೆ ವಿಧದ ಪೈಪ್ ಗಳು ಟೈಪ್ ಎ ಮಳೆಯ ನೀರಿಗಾಗಿ ಹಾಗೂ ಬಿ ಮಣ್ಣು ತ್ಯಾಜ್ಯ ಹಾಗೂ ತೆಳು ವಸ್ತುಗಳಿಗಾಗಿ ಉಪಲಬ್ಧವಿದೆ. ಸೆಲ್ಫಿಟ್ ಜೋಡಣೆಗಳನ್ನು ಸಾಕೆಟ್ ಅಥವಾ ಸೋಲ್ವೆಂಟ್ ಸಿಮೆಂಟಿನ ಸಂಯೋಜಿತ ರಿಂಗ್ ಗಳ ಮೂಲಕ ಜೋಡಿಸುವುದರಿಂದ ಶಾಶ್ವತ ಏಕರೂಪದ ಜೋಡಣೆಯಾಗುತ್ತದೆ. ಎಸ್ ಡಬ್ಳೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ಸ್ ಗಳು ಆಧುನಿಕ ತಾಂತ್ರಿಕತೆಯಿಂದ ಸಾಕೆಟ್ ನೊಂದಿಗೆ ವಿಶೇಷ ಯಂತ್ರಗಳ ಮುಖೇನ ತಯಾರಿಸಲಾಗಿದೆ. ಸಂಯೋಜಿತ ರಿಂಗ್ ಗಳು ಸಾಕೆಟ್ ನ ಜಾಗದಲ್ಲಿ ಶಾಶ್ವತವಾಗಿ ಮೊದಲೇ ಆಧುನಿಕ ಪ್ಲಾಸ್ಟಿಕ್ ಮೋಲ್ಡಿನಿಂದ ಜೋಡಿಸಲ್ಪಟ್ಟಿರುವ ಕಾರಣದಿಂದಾಗಿ ಸಾಂಪ್ರದಾಯಿಕ ರಬ್ಬರ್ ರಿಂಗ್ ಗಳಂತೆ ಜೋಡಿಸುವ ಸಮಯದಲ್ಲಿ ಹೊರಬರುವ ಸಾಧ್ಯತೆಗಳಿಲ್ಲ. ಹಾಗಾಗಿ ಇದು ವಾಟರ್ ಟೈಟ್ ಜೋಡಣೆಯಾಗಿದ್ದು ಸಂಕುಚನ ಹಾಗೂ ವಿಕಸನಕ್ಕೆ ಹೊಂದಿಕೊಂಡು ಜೋಡಣೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಇವು ತುಂಬಾ ಸುಲಭದ ತಂತ್ರಜ್ಞಾನವಾಗಿದ್ದು 100% ಲೀಕ್ ಫ್ರೂಫ್ ಆಗಿ ಸಿಸ್ಟಮ್ ಹಾಗೂ ಸುಲಭವಾಗಿ ಅನುಸ್ಥಾಪಿಸಬಹುದು. ಮತ್ತು ನಿರ್ವಹಣೆಯ ವೆಚ್ಚವೂ ಕಡಿಮೆಯಾಗಿದೆ. ಈ ಪೈಪ್ ಗಳು ಅತ್ಯಂತ ನಯವಾದ ಬೋರ್ ಗಳನ್ನು, ಲೀಕ್ ಫ್ರೂಪ್ ಜೋಡಣೆ ಮತ್ತು ಸಂಪೂರ್ಣ ಜೀವಿತಾವಧಿಯ ಕಾಲ ಉತ್ತಮ ಹೈಡ್ರಾಲಿಕ್ ಶಕ್ತಿಯನ್ನು ಒದಗಿಸುತ್ತದೆ. ಫಿನೋಲೆಕ್ಸ್ ಎಸ್ ಡಬ್ಲೂ ಆರ್ ಪೈಪ್ಸ್ ಹಾಗೂ ಫಿಟ್ಟಿಂಗ್ ಗಳು ಯುವಿ ಪ್ರತಿರೋಧಕವಾಗಿದ್ದರಿಂದಾಗಿ ಕಟ್ಟಡಗಳ ಹೊರಗಡೆಯೂ ಅನುಸ್ಥಾಪಿಸಬಹುದು.

 

 

ಸೆಲ್ಫಿಟ್ ಎಸ್ ಡಬ್ಲೂ ಆರ್ ಪಿವಿಸಿ ಪೈಪ್ ಗಳು

ಒಂದು ಬದಿ ಸಾದಾವಾಗಿದ್ದು ಇನ್ನೊಂದು ಬದಿ ಸೆಲ್ಫ್-ಸಾಕೆಟ್ ಇರುವ ಫಿನೋಲೆಕ್ಸ್ ಎಸ್ ಡಬ್ಲೂ ಆರ್ ಪೈಪ್ ಗಳನ್ನು ಸ್ವಯಂ ಚಾಲಿತ ಅತ್ಯಾಧುನಿಕ ಮೆಶಿನ್ ಗಳ ಮೂಲಕ ಮಾಡಲಾಗುತ್ತದೆ. ಈ ಪೈಪ್ ಗಳ ವಿಶೇಷತೆ ಎಂದರೆ ಇವುಗಳನ್ನು ಸೋಲ್ವೆಂಟ್ ಸಿಮೆಂಟಿನ ಮೂಲಕ ಸುಲಭವಾಗಿ ಜೋಡಿಸಬಹುದು. ಹಾಗೂ ಇವುಗಳು ಶಾಶ್ವತ ವಾಟರ್ ಫ್ರೂಫ್ ಜೋಡಣೆಗಳಾಗಿದ್ದು ಹೆಚ್ಚು ಬಾಳ್ವಿಕೆಯನ್ನು ಹೊಂದಿದೆ.

 

 

ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ಸ್ ಸಂಯೋಜಿತ ರಿಂಗ್ ಗಳೊಂದಿಗೆ

ಸಂಯೋಜಿತ ರಿಂಗ್ ಗಳು ಸಾಕೆಟ್ ಗೆ ಮೊದಲೇ ಶಾಶ್ವತವಾಗಿ ಜೋಡಿಸುವ ಕಾರಣದಿಂದಾಗಿ ಈ ರಿಂಗ್ ಗಳು ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ ಗಳನ್ನು ತ್ವರಿತವಾಗಿ ಅನುಸ್ಥಾಪಿಸಲು ಸಹಾಯಕವಾಗಿವೆ. ಸ್ಪೈಗೋಟ್ ತುದಿಯನ್ನು ಸಾಕೆಟ್ ತುದಿಗೆ ಸರಳವಾಗಿ ತಳ್ಳುವ ಮೂಲಕ ಈ  ಜೋಡಣೆಯನ್ನು ಮಾಡಬಹುದು. ಈ ಜೋಡಣೆಗೆ ಯಾವುದೇ ಸೋಲ್ವೆಂಟ್ ಸಿಮೆಂಟಿನ ಅಗತ್ಯವಿಲ್ಲ.
 

 

ಅರ್ಜಿಗಳ ಕ್ಷೇತ್ರಗಳು

 

•       ವಸಾಹತುಗಳು, ವಾಣಿಜ್ಯ ಕೇಂದ್ರಗಳ, ರೋಸೋಟ್ ಗಳ, ಆಸ್ಪತ್ರೆಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ತ್ಯಾಜ್ಯ ವಿಸರ್ಜನೆಯ ವ್ಯವಸ್ಥೆಗೆ.

•      ಸಿ ಐ ಮತ್ತು ಜೀ ಐ ಪೈಪಿಂಗ್ ಗೆ ಉತ್ತಮ ಪರ್ಯಾಯ.

•       ಗೃಹ ಬಳಕೆಯ ಕೊಳಾಯಿ(ಪ್ಲಂಬಿಂಗ್) ಯ ಅನಿಲ ಮತ್ತು ವಾಸನೆಗಳನ್ನು ಹೊರದೂಡಲು.

•       ನಾನ್ ಪ್ರೆಶರ್ ಔದ್ಯೋಗಿಕ ಚರಂಡಿಗಳ ಉಪಯೋಗ (ರಾಸಾಯನಿಕ ಹೊಂದಾಣಿಕೆಯ ಆಧಾರದ ಮೇಲೆ)

•       ಮಳೆಯ ನೀರಿನ ನಿರ್ವಹಣೆ (ಟ್ರಾನ್ಸ್ ಪೋರ್ಟೇಶನ್) ಹಾಗೂ ಗೃಹೋಪಯೋಗಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರು ಸರಬರಾಜು ಮಾಡಲು.

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.