ಆರೋಗ್ಯ ರಕ್ಷಣೆಯ ಜವಾಬ್ದಾರಿ

ಮುಕುಲ್ ಮಾಧವ್ ಫೌಂಡೇಶನ್  ಪುಣೆಯ ಹಲವಾರು ಆಸ್ಪತ್ರೆಗಳೊಂದಿಗೆ  ನಿಕಟ ಸಂಪರ್ಕ ಹೊಂದಿದ್ದು, ಫಿನೋಲೆಕ್ಸ್ ಇಂಡಸ್ಟ್ರೀಸ್ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಈ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ದೇಣಿಗೆ ನೀಡಿದೆ.

ಇದಲ್ಲದೆ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಮ್ ಎಮ್ ಎಫ್, ಅಕ್ಟೋಬರ್ 2013ರಲ್ಲಿ ಪ್ರಶಾಂತಿ ಕ್ಯಾನ್ಸರ್ ಕೇರ್ ಮಿಶನ್ ಆಯೋಜಿಸಿದ್ದ ಭಾಗ್ ಪುಣೆ ಭಾಗ್ ಎಂಬ ಮ್ಯಾರಾಥಾನ್ ನ ಪ್ರಾಯೋಜಕತ್ವವನ್ನು ಮಾಡಿತ್ತು.

                           ಮಕ್ಕಳಿಗೆ ಉಚಿತ ವೈದ್ಯಕೀಯ ಶಿಬಿರಗಳು

2008ರಿಂದ ಎಮ್ ಎಮ್ ಎಫ್ ರತ್ನಗಿರಿ ಹಾಗೂ ಅದರ ಆಸುಪಾಸಿನ ಸರ್ಕಾರಿ ಶಾಲೆಗಳಲ್ಲಿ ದ್ವಿವಾರ್ಷಿಕವಾಗಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಪ್ರತಿ ಶಿಬಿರದಲ್ಲಿ ದಂತವೈದ್ಯರು, ಕಣ್ಣಿನ ತಜ್ಞರು, ಹಾಗೂ ಜನರಲ್ ಪಿಸೀಸಿಯನ್ಸ್ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ಮಾಡುತ್ತಾರೆ. ಕೆ ಈ ಎಮ್ ಆಸ್ಪತ್ರೆ ಪುಣೆ, ಭಾರತಿ ವಿದ್ಯಾಪೀಠ ಸ್ಕೂಲ್ ಆಫ್ ಆಯಿಯೋಲೊಜಿ, ಭಾರತಿ ವಿದ್ಯಾಪೀಠ,  ಡೆಂಟಲ್ ಕಾಲೇಜ್ ಹಾಗೂ ಎಚ್ ವಿ ದೇಸಾಯಿ ಐ ಹಾಸ್ಪಿಟಲ್ ನಂತಹ ಪ್ರಮುಖ ಆಸ್ಪತ್ರೆಗಳ ವೈದ್ಯರು ಮತ್ತು ತಜ್ಞರು ಈ ಶಿಬಿರಗಳಲ್ಲಿ  ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಲು ಮೆಡಿಕಲ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಎಮ್ ಎಮ್ ಎಫ್ ಇನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದೆ.

2013 ರಿಂದ ಫಿನೋಲೆಕ್ಸ್ ಇಂಟಸ್ಟ್ರೀಸ್  ಲಿಮಿಟೆಡ್ ಈ ಯೋಜನೆಗೆ ಬೆಂಬಲ ನೀಡುತ್ತದೆ.

2014  ಫೆಬ್ರವರಿಯಿಂದ ಎಮ್ ಎಮ್ ಎಫ್ ಹಾಗೂ ಎಫ್ ಐ ಎಲ್ ಇದೇ ರೀತಿಯ ಆರೋಗ್ಯ ಶಿಬಿರಗಳನ್ನು ಪುಣೆಯ ಕೊಳಚೆ ಪ್ರದೇಶದ ಹಾಗೂ ಪಂಚಗನಿಯ ಮುನಿಸಿಪಲ್ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದೆ.

 

                        ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ನ ಅರಿವು

ಸಂವೇದನೆ ಮತ್ತು ಗರ್ಭಕೋಶದ ಕ್ಯಾನ್ಸರ್ ಸಂವೇದನೆ ಹಾಗೂ ಸಾರ್ವಜನಿಕರಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಪುಣೆಯ ಪ್ರಖ್ಯಾತ ಎನ್ ಜಿ ಓ “ಪ್ರಶಾಂತಿ ಕ್ಯಾನ್ಸರ್ ಕ್ಯಾರ್ ಮಿಶನ್”  ನ ಸಹಯೋಗದಲ್ಲಿ ಎಮ್ ಎಮ್ ಎಫ್ ಮತ್ತು ಎಫ್ ಐ ಎಲ್ “ಕ್ಯಾನ್ಸರ್ ಡೈಯೋಗ್ನಾಸಿಸ್ ಎಟ್ ಯುವರ್ ಡೋರ್ ಸ್ಟೆಪ್” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿತ್ತು. ಡಿಸೆಂಬರ್ 2013ರಲ್ಲಿ ರತ್ನಗಿರಿಯ ಗ್ರಾಮೀಣ ಮಹಿಳೆಯರಿಗಾಗಿ ಹಾಗೂ ಮಾರ್ಚ್ 2014ರಲ್ಲಿ ಪುಣೆಯ ಕೊಳಚೆಗೇರಿ ಪ್ರದೇಶದಲ್ಲಿ ವಾಸಿಸುವ ಸ್ತ್ರೀಯರಿಗಾಗಿ ಈ ಕ್ಯಾಂಪನ್ನು ಆಯೋಜಿಸಲಾಗಿತ್ತು.

 

ಯೋಗ್ಯ ವೈದ್ಯರ ಸಲಹೆಗಾರರ ಮತ್ತು ತರಬೇತಿ ಪಡೆದ ತಂತ್ರಜ್ಞಾನ ಸಹಾಯದಿಂದ ಈ ಎರಡೂ ಕ್ಯಾನ್ಸರ್ ಗಳ ಟೆಸ್ಟನ್ನು(ಪರೀಕ್ಷೆಯನ್ನು)  ನಡೆಸಲಾಯಿತು. ಅಗತ್ಯವಿರುವ ಎಲ್ಲಾ ಮೆಶನರಿಗಳನ್ನು ಹೊಂದಿದ್ದ ಮೊಬೈಲ್ ವ್ಯಾನನ್ನು ಈ ಪರೀಕ್ಷೆ ನಡೆಸಲು ಬಳಸಲಾಯಿತು.

 

ರತ್ನಗಿರಿಯ ಕ್ಯಾನ್ಸರ್ ಡಿಟೆಕ್ಷನ್ ಕ್ಯಾಂಪ್ ನ ಗಮನಾರ್ಹ ಯಶಸ್ಸಿನಿಂದ, ಜನರಿಗೆ ಕ್ಯಾನ್ಸರ್ ಕೇರ್ ಸೇವೆಯ ಮಾಹಿತಿಗಳನ್ನು ನೀಡುವ ವಿಶೇಷ ಕ್ಲಿನಿಕ್ ನ ಅಗತ್ಯವಿದೆಯೆಂದು ತಿಳಿದು ಬಂತು.

 

ಹಾಗಾಗಿ, ಅಲ್ಲಿಯ ಮಹಿಳೆಯರ ಆರೋಗ್ಯದ ಉನ್ನತಿಯ ದೃಷ್ಟಿಯಲ್ಲಿ, ಫಿನೋಲೆಕ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಹಾಗೂ ಪ್ರಶಾಂತಿ  ಕ್ಯಾನ್ಸರ್ ಕೇರ್ ನ ಸಹಭಾಗಿತ್ವದಲ್ಲಿ,  ಮುಕುಲ್ ಮಾಧವ್ ಫೌಂಡೇಶನ್ ಮ್ಯಾಮ್ಯೋಗ್ರಾಫಿ ಹಾಗೂ ಕ್ಯಾಲ್ಪೋಸ್ಕೋಪಿಯ ಪರೀಕ್ಷೆಗಳನ್ನು ಸಬ್ಸಿಡೈಸ್ ಡ್ (ಅನುದಾನಿತ) ವೆಚ್ಚದಲ್ಲಿ  ಮಾಡುವ ಫಿನೋಲೆಕ್ಸ್ ವೂಮೆನ್ಸ್ ವೆಲ್-ಬೀಯಿಂಗ್ ಕ್ಲಿನಿಕ್ ಎಂಬ ಕ್ಯಾನ್ಸರ್ ತಪಾಸಣೆಯ (ಡಯೋಗ್ನೋಸಿಸ್) ಕ್ಲಿನಿಕನ್ನು ರತ್ನಗಿರಿಯ ಪಾರ್ಕರ್ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಿತು.

 

ಜೂನ್ 2014ರಲ್ಲಿ ಈ ವೆಲ್-ಬೀಯಿಂಗ್ ಕ್ಲಿನಿಕ್ ನಲ್ಲಿ ಡಾ. ಸಿ ಬಿ ಕೊಪ್ಪಿಕರ್ ಪ್ರಥಮ ಥೆರಾಪ್ಲಾಟಿಕ್ ಮ್ಯಾಮ್ಮೋಪ್ಲಾಸ್ಟಿಯನ್ನು ನಿಭಾಯಿಸಿ ಇತಿಹಾಸವನ್ನೇ ರಚಿಸಿದರು.

 

ರತ್ನಗಿರಿಯ ಎಲ್ಲಾ ಮಹಿಳೆಯರಿಗೆ ಕಡ್ಡಾಯವಾಗಿ ನಿರಂತರ ತಪಾಸಣೆಯನ್ನು ನಡೆಸುವ ಸಂದೇಶವನ್ನು ಹರಡಲು ವರ್ಷದಲ್ಲಿ ಎರಡು ಸಲ ಕ್ಲಿನಿಕ್ ನಲ್ಲಿ ಮ್ಯಾಮ್ಮೋಗ್ರಾಫಿ ಕ್ಯಾಂಪ್ ಗಳನ್ನು ಏರ್ಪಡಿಸುತ್ತೇವೆ, ಹಾಗೂ ಇದರ ವೆಚ್ಚದ 80% ರಷ್ಟು ಫಿನೋಲೆಕ್ಸ್ ಪೈಪ್ಸ್ ಪ್ರಾಯೋಜಕತ್ವ ವಹಿಸಿಕೊಳ್ಳುತ್ತದೆ.

 

ಇಷ್ಟೇ ಅಲ್ಲದೆ, ಕಳೆದ ಮೂರು ವರುಷಗಳಿಂದ ಫಿನೋಲೆಕ್ಸ್ ಪೈಪ್ಸ್ ಹಾಗೂ ಮುಕುಲ್ ಮಾಧವ್ ಫೌಂಡೇಶನ್,  “ಅವರ್ ಮ್ಯಾರಥಾನ್ ಫಾರ್ ಬ್ರೆಸ್ಟ್ ಕ್ಯಾನ್ಸರ್” ನಲ್ಲಿ ಪಾಲ್ಗೊಳ್ಲುತ್ತಿದೆ.

 

          ರೂಬಿ ಹಾಲ್ ಕ್ಲಿನಿಕ್, ಪುಣೆ ಏಂಡ್ ಹೀಲಿಂಗ್ ಲಿಟ್ಲ್ ಹಾರ್ಟ್ಸ್, ಯುಕೆ.

 

ಮುಕುಲ್ ಮಾಧವ್ ಫೌಂಡೇಶನ್ ಮತ್ತು ಫಿನೋಲೆಕ್ಸ್ ಪೈಪ್ಸ್ ಮಾರ್ಚ್ 2014ರಿಂದ  ತ್ರೈಮಾಸಿಕವಾಗಿ ಯುಕೆಯ ಪ್ರಖ್ಯಾತ ಚಾರೀಟೀ ಸಂಸ್ಥೆ ಹೀಲಿಂಗ್ ಲಿಟ್ಲ್ ಹಾರ್ಟ್ಸ್ (ಎಚ್ ಎಲ್ ಎಚ್) ಮತ್ತು ಗ್ರಾಂಟ್ ಮೆಡಿಕಲ್ ಫೌಂಡೇಶನ್ ಪುಣೆಯಲ್ಲಿರುವ ರೂಬಿ ಹಾಲ್ ಕ್ಲಿನಿಕ್ ನೊಂದಿಗೆ ಸೇರಿಕೊಂಡು ಪೇಡ್ರಿಯಾಟ್ರಿಕ್ ಕಾರ್ಡಿಕ್(ಮಕ್ಕಳ ಹೃದಯ ಸಂಬಂಧಿ) ಕ್ಯಾಂಪ್ಸ್ ಗಳ ಯೋಜನೆಯನ್ನು ಪ್ರಾರಂಭಿಸಿತು. ಹೃದಯದ ಗಂಭೀರ ಸಮಸ್ಯೆಗಳಿಗಾಗಿ, ರೂಬಿ ಹಾಲ್ ಕ್ಲಿನಿಕ್ ನ ವೈದ್ಯರಿಗೆ ಮಾರ್ಗದರ್ಶನ ಮಾಡಲು ವಿಶೇಷ ವೈದ್ಯಕೀಯ ತಜ್ಞರ ತಂಡವನ್ನು ನಾವು ಯುಕೆ ಯಿಂದ ಪುಣೆಗೆ ಕರೆಸುತ್ತೇವೆ. ಈ ತಂಡದಲ್ಲಿ ಶಿಶು ತಜ್ಞರು (ಪೇಡಿಯಾಟ್ರಿಶಿಯನ್ಸ್) ನರ್ಸಸ್ (ದಾದಿಯರು) ಹಾಗೂ ತಜ್ಞರಿರುತ್ತಾರೆ. ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ಲೈಸೆಸ್ಟರ್, ಆಲ್ಡರ್ ಹೇ ಚಿಲ್ಡ್ರನ್ಸ್ ಆಸ್ಪತ್ರೆ,  ಲಿವರ್ ಫೂಲ್ ಚಿಲ್ಡ್ರನ್ಸ್ ಆಸ್ಪತ್ರೆ ಮತ್ತು ಹಲವಾರು ವೈದ್ಯಕೀಯ ಸಂಸ್ಥೆಗಳಿರುತ್ತವೆ. ಈ ಪ್ರೋಗ್ರಾಂ ನಲ್ಲಿ ವೈದ್ಯರು, ಹೀಲಿಂಗ್ ಲಿಟ್ಲ್ ಹಾರ್ಟ್ಸ್ ಲೈಸೆಸ್ಟರ್,ಯುಕೆ ಯ ಫೌಂಡರ್ ರಾದ ಡಾ. ಸಂಜೀವ ನಿಚಾನಿಯೊಂದಿಗೆ ನೊಂದಾಯಿಸಬಹುದು.

 

ಪ್ರಸ್ತುತ ಭಾರತದಲ್ಲಿ ಹೃದಯದ ಸಮಸ್ಯೆಯಿರುವ ಮಕ್ಕಳಿಗೆ ಸೂಕ್ತವಾದ ಸರ್ಜಿಕಲ್ ಟ್ರಿಟ್ ಮೆಂಟ್ ಸಿಗುತ್ತಿಲ್ಲ. ಅಥವಾ ಅಂತಹ ಮಕ್ಕಳ(ಕಡಿಮೆ ತೂಕದ ಮಕ್ಕಳು) ಅಪರೇಶನ್ ಮಾಡಲು ಪರಿಣಿತ ಡಾಕ್ಟರ್ ರ ಕೊರತೆ, ಯಾ ಆಪರೇಶನ್ ನ ನಂತರದ ಆರೈಕೆಯ ಕೊರತೆಯಿಂದಾಗಿ ಮಕ್ಕಳ ಮರಣದ ದರ(ಮೋರ್ಟಾಲಿಟೀ ರೇಟ್) ಹೆಚ್ಚಾಗುತ್ತದೆ.  ಇಂತಹ ಪರಿಸ್ಥಿತಿಗಳನ್ನು ಭಾರತದಿಂದ ಹೋಗಲಾಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.

 

ಹೀಲಿಂಗ್ ಲಿಟ್ಲ್ ಹಾರ್ಟ್ಸ್ ನ ಸದಸ್ಯರು ಯಾವುದೇ ಆರ್ಥಿಕ ಸಂಭಾವನೆ ತೆಗೆದುಕೊಳ್ಳದೆ ಈ ಯೋಗ್ಯ ಕೆಲಸಕ್ಕಾಗಿ  ಭಾರತಕ್ಕೆ ಬಂದು ತಮ್ಮ ಸಮಯವನ್ನು ವಿನಿಯೋಗಿಸುತ್ತಾರೆ. ಈ ಸರ್ಜನ್ ಗಳು ಹೃದಯದ ಸಮಸ್ಯೆಗಳಿಂದ ಬಳಲುವ ನವಜಾತ ಶಿಶುಗಳಿಗೆ ಆಪರೇಶನ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ ಹಾಗೂ ತಜ್ಞರ ಹಾಗೂ ನರ್ಸ್ ಗಳ ತಂಡ ಆಪರೇಶನ್ ನಂತರದ ಆರೈಕೆಯಲ್ಲಿ ನುರಿತರಾಗಿದ್ದಾರೆ.

 

ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್,  ಮುಕುಲ್ ಮಾಧವ್ ಫೌಂಡೇಶನ್ ಮೂಲಕ ಈ ತಂಡಗಳ ವಸತಿ ಸೌಕರ್ಯ ಹಾಗೂ ಇಲ್ಲಿಯ ಅವರ ಪ್ರಯಾಣದ ವೆಚ್ಚವನ್ನು ಪ್ರಾಯೋಜಕತ್ವ ಮಾಡುತ್ತದೆ. ಹಾಗೂ ಪುಣೆಯ ಇತರ ಆಸ್ಪತ್ರೆಯೊಂದಿಗೆ ಈ ತರದ ಸಂಬಂಧವನ್ನು ಮುಂದುವರಿಸುವ ಸಾಧ್ಯತೆಯನ್ನು ಪರಿಗಣಿಸಲಾಗುತ್ತದೆ. ಮಾಜ್ಡಾ ಕಲರ್ಸ್ ಲಿಮಿಟೆಡ್ ನ ಅಮಿತ್ ಹಾಗೂ ಪ್ರೀತೀ ಚೋಕ್ಸಿಯವರಿಂದ ಈ ತಂಡದ ಅಂತರ ರಾಷ್ಟ್ರೀಯ ಪ್ರಯಾಣದ ವೆಚ್ಚವನ್ನು ಸ್ವೀಕರಿಸುವಲ್ಲಿ ನಾವು ಭಾಗ್ಯಶಾಲಿಗಳಾಗಿದ್ದೇವೆ.

 

ಮೇ 2016 ರಲ್ಲಿ 100 ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ.

                                                ಆರೋಗ್ಯ ಶಿಬಿರಗಳು

 

ನಮ್ಮ ಫ್ಯಾಕ್ಟರಿಗಳಲ್ಲಿ ಹಾಗೂ ಆಫೀಸುಗಳಲ್ಲಿ ನಮ್ಮ ಎಲ್ಲಾ ನೌಕರಿಗಾಗಿ ನಾವು ನಿರಂತರ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತೇವೆ.

 

 

 

 

 

ಗ್ಯಾಲರಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.