ನೀರು ಮತ್ತು ಪರಿಸರ ಸಂರಕ್ಷಣೆ

ನಮ್ಮ ಘಟಕಗಳಲ್ಲಿ ವಾತಾವರಣವನ್ನು ಸಮರ್ಥಿಸುವ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಯ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ವಾತಾವರಣವನ್ನು ಸಂರಕ್ಷಿಸುವ ಅತೀ ಉತ್ತಮ ಮಾನದಂಡಗಳನ್ನು ಸಾಧಿಸಲು ಬದ್ಧರಾಗಿದ್ದೇವೆ. ರತ್ನಗಿರಿಯಲ್ಲಿ ISO 14001 ರ ಮಾನದಂಡದಲ್ಲಿ ಕಂಪೆನಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತಗೊಂಡ ಎನ್ವೈರ್ಮೆಂಟ್ ಮ್ಯಾನೆಜ್ಮೆಂಟ್  ಸಿಸ್ಟಮನ್ನು ಅಳವಡಿಸಲಾಗಿದೆ. ಫಿನೋಲೆಕ್ಸ್ ಗಾಳಿ, ನೀರು ಶಬ್ಧ ಉಪಾಯಕಾರಿ ತ್ಯಾಜ್ಯ, ಈ – ತ್ಯಾಜ್ಯ ಮುಂತಾದ ವಾತಾವರಣ ಮಾಲಿನ್ಯಕ್ಕೆ ಅನ್ವಯಿಸುವ ವಸ್ತುಗಳು ಯಾವುದು ಸಮಾಜಕ್ಕೆ ಪರಿಣಾಮ ಬೀರುತ್ತವೋ ಅವುಗಳ ಪ್ರಮಾಣವನ್ನು ಕಡಿಮೆ ಮಾಡುವ ನಿಯಮಗಳನ್ನು ಪಾಲಿಸಲು ಕಠಿಬದ್ಧವಾಗಿದೆ. ರತ್ನಗಿರಿಯ ಫಿನೋಲೆಕ್ಸ್ 43 ಎಮ್ ಡಬ್ಲ್ಯೂ ಕ್ಯಾಪ್ಟಿವ್ ಪವರ್ ಪ್ಲ್ಯಾಂಟ್, ಫ್ಲೈ ಆಶ್ ನೋಟಿಫಿಕೇಶನ್ (ಮಿನಿಸ್ಟ್ರೀ ಆಫ್ ಎನವಾಯರನ್ ಮೆಂಟ್ ಏಂಡ್ ಫಾರೆಸ್ಟ್ ನಿಂದ ನೀಡಲಾದ) ನ ಫ್ಲೈ ಆಶ್ ನ ಬಳಕೆಯ ಮಾನದಂಡವನ್ನು ಶೇಕಡಾ 100 ರಷ್ಟು ಗಳಿಸಿವೆ)

 

ಡೈರೆಕ್ಟರೇಟ್ ಆಫ್ ಇಂಡಸ್ಟ್ರೀಯಲ್ ಸೇಫ್ಟಿ ಏಂಡ್ ಹೆಲ್ತ್, ಮಹಾರಾಷ್ಟ್ರ ಹಾಗೂ ನೇಶನಲ್ ಸೇಫ್ಟೀ ಕೌನ್ಸಿಲ್ – ಮಹಾರಾಷ್ಟ್ರ ಚಾಪ್ಟರ್, ರತ್ನಗಿರಿಯಲ್ಲಿರುವ ಪಿವಿಸೀ ಉತ್ಪಾದನೆಯ ಘಟಕಕ್ಕೆ ಬೆಸ್ಟ್ ಸೇಫ್ಟೀ  ಪ್ರಾಕ್ಟೀಸನ್ 2015 ಪ್ರಶಸ್ತಿಯಿಂದ ಸನ್ಮಾನಿಸಿದೆ. ನಮ್ಮ ಉತ್ಪಾದನಾ ಘಟಕಗಳಲ್ಲಿ ಆಧುನಿಕ ಫೈರ್ ಸೇಫ್ಟೀ ಉಪಕರಣಗಳನ್ನು ಅಳವಡಿಸಲಾಗಿದೆ. ನಮ್ಮ ಘಟಕಗಳಲ್ಲಿ ತಮ್ಮದೇ ಆದ ಸ್ವಂತ ಫೈರ್ ಫೈಟರ್ ಗಳಿವೆ ಮತ್ತು ಇವುಗಳ ಯಾವುದೇ ಪೆಟ್ರೊ ಕೆಮಿಕಲ್ ಘಟಕಗಳಲ್ಲಿರುವಂತೆ ಒಳ್ಳೆಯ ಸಾಮರ್ಥ್ಯದಿಂದ ಫೈರ್ ಹಾಗೂ ರಕ್ಷಣೆಯ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಫಾರ್ ಫೈಟಿಂಗ್ ವ್ಯವಸ್ಥೆಗಳನ್ನು ಸಕ್ಷಮವಾಗಿ ಹಾಗೂ ಎಚ್ಚರಿಕೆಯಿಂದಿರಿಸಲು ಆನ್ ಸೈಟ್ ಎಮರ್ಜನ್ಸಿ ಮ್ಯಾನೇಜ್ಮೆಂಟಿನ  ಆಧಾರದಲ್ಲಿ ಫ್ಯಾಕ್ಟರಿಯಲ್ಲಿ ನಮ್ಮೆಲ್ಲಾ ಮುಖ್ಯ ಸಿಬ್ಬಂಧಿಗಳು  ಅಣುಕು ಡ್ರಿಲ್ಸ್ ಮತ್ತು ಫೈರ್ ಡ್ರಿಲ್ಸ್ ಗಳಲ್ಲಿ ವರ್ಷವಿಡೀ ಭಾಗವಹಿಸುತ್ತಾರೆ. ಈ ಫೈರ್ ಫೈಟಿಂಗ್ ಸೇವೆಯನ್ನು ಆಸುಪಾಸಿನ ಗ್ರಾಮಗಳಲ್ಲಿ ಸಮುದಾಯಗಳಲ್ಲಿ ಅಷ್ಟೇ ಅಲ್ಲದೆ ರತ್ನಗಿರಿಯ ನಗರ ಹಾಗೂ ರತ್ನಗಿರಿಯ ಆಸುಪಾಸಿನ ಇಂಡಸ್ಟ್ರೀಗಳಿಗೆ ಒದಗಿಸುತ್ತವೆ. ಫಿನೋಲೆಕ್ಸ್ ನಂಬಿಕೆ “ಸರ್ವಿಸ್ ಬಿಯೋಂಡ್ ಸೆಲ್ಪ್”.

ವಾಯು ಮಾಲಿನ್ಯವನ್ನು ತಡೆಯುವುದು

 

ಫಿನೋಲೆಕ್ಸ್, ನೇಶನಲ್ ಆಂಬಿಯೆಂಟ್  ಏರ್ ಕ್ವಾಲಿಟಿ ಸ್ಟಾಂಡರ್ಡ್ ನ ಅವಶ್ಯಕತೆಗಳಿಗನುಸಾರವಾಗಿ ಪ್ರಕ್ರಿಯೆಗಳನ್ನು ಸ್ಥಾಪಿಸಿದೆ. ಕಣಗಳ ವಿಷಯದಲ್ಲಿ ಸಲ್ಫರ್ ಡೈ ಆಕ್ಸೈಡ್ ಮತ್ತು  ನೈಟ್ರೋಜನ್ ನ ಆಕ್ಸೈಡ್ ಗಳನ್ನು ಎಲ್ಲಾ ನಿಯತಾಂಕಗಳ (ಪ್ಯಾರಾಮೀಟರ್ಸ್) ಪ್ರಮಾಣದಲ್ಲಿ ವಿಶ್ಲೇಷಿಸಲಾಗುತ್ತದೆ. ಎಲ್ಲಾ ಸ್ಟ್ಯಾಕ್  ಹೊರ ಸೂಸುವಿಕೆಗಳನ್ನು ನಿರಂತರ ಪರೀಕ್ಷಿಸಲಾಗುತ್ತದೆ ಮತ್ತು ಪೊಲ್ಯೂಶನ್ ಕಂಟ್ರೋಲ್ ಬೋರ್ಡಿನ ಪ್ರಮಾಣದಲ್ಲಿ ಪ್ಲೂಗ್ಯಾಸ್ ನ ಗುಣಮಟ್ಟಗಳನ್ನು ನಿಯಂತ್ರಣದಲ್ಲಿರಿಸಲಾಗುತ್ತದೆ. ಸಿಪಿಪಿ ಸ್ಟ್ಯಾಕ್ ಆನ್ ಲೈನ್ ಮೋನಿಟರಿಂಗ್ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿದೆ. ಹಾಗೂ ಎಮ್ ಪಿಸಿಬಿ ಸಂಪರ್ಕಕ್ಕೆ ಸಿದ್ಧವಾಗಿರುತ್ತದೆ.

 

ಜೀರೊ ಎಫ್ಲುಯೆಂಟ್ ಡಿಸ್ಟಾರ್ಜ್ ಶೂನ್ಯ ಮಲಿನವನ್ನು ಹೊರಹಾಕುವಿಕೆ

 

ರತ್ನಗಿರಿಯ ಘಟಕದ ಪರಿಸರದಲ್ಲಿ ವಾತಾವರಣ ಹಾಗೂ ನೀರಿನ ಕೇಂದ್ರಗಳನ್ನು ಮಾಲಿನ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ, ಪಿವಿಸೀ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಿವಿಸೀ ಉತ್ಪಾದನೆಯ ಸಂದರ್ಭದಲ್ಲಿ ಹೊರಬರುವ ತ್ಯಾಜ್ಯಗಳನ್ನು ಕಂಪೆನಿಯ ವಿಶ್ವಮಟ್ಟದ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಬೇರೆ ಬೇರೆ ರೀತಿಯ ಪ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತದೆ. ಈ ನಿರ್ವಹಣೆಗಳೆಂದರೆ ಈ ಕ್ವಲೈಸೇಶನ್ ಫ್ಲೋಕ್ಯುಲೇಶನ್, ಫ್ಲೋಕ್ ಸಪರೇಶನ್, ಏರೇಶನ್ ಏಕ್ಟಿವೇಟೆಡ್ ಸ್ಲಡ್ಜ್ ಪ್ರಕ್ರಿಯೆ, ಕ್ಲಾರಿಫಿಕೇಶನ್, ಕಾರ್ಬನ್ ಫಿಲ್ಟರನ್ನು ಬಳಸಿ ಸ್ವಚ್ಛಗೊಳಿಸುವುದು ಇತ್ಯಾದಿ. ನಿರ್ವಹಣೆಗೊಂಡ ತ್ಯಾಜ್ಯವನ್ನು ದಿನಂಪ್ರತಿ ಎಮ್ ಪಿ ಸಿ ಬಿ ಯ ಮಾನದಂಡನೆಗನುಸಾರವಾಗಿ ಪರೀಕ್ಷಿಸಲಾಗುತ್ತದೆ. ಇವುಗಳನ್ನು ಪುನಃ ಅಲ್ಟ್ರಾ ಪಿಲ್ಟ್ರೇಶನ್ ಗೊಳಪಡಿಸಿ ತ್ಯಾಜ್ಯಗಳನ್ನು ಹೊರ ತೆಗೆದು, ಖನಿಜೀಕರಣಗೊಳಿಸಿ ನೀರಿನ ಪ್ರಕ್ರಿಯೆಗಳಿಗಾಗಿ ಮರುಬಳಕೆಗೊಳಿಸಲಾಗುತ್ತದೆ. ಈ ರೀತಿ ಫಿನೋಲೆಕ್ಸ್ ತನ್ನ  ಜೀರೋ ತ್ಯಾಜ್ಯದ ಗುರಿಯನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಉಳಿದ ವಸ್ತುಗಳನ್ನು ತೋಟಗಾರಿಕೆ,  ಹಾರ್ಟೀಕಲ್ಚರ್ ಮತ್ತು ಟ್ರೀ ಪ್ಲಾಂಟೇಶನ್ ಬಳಸಲಾಗುತ್ತದೆ, ಭೂಮಿಯೊಳಗಿನ ನೀರಿನ ಗುಣಮಟ್ಟವನ್ನು ನಿರಂತರವಾಗಿ ಸ್ಯಾಂಪ್ಲಿಂಗ್ ಹಾಗೂ ಬೋರ್ ವೆಲ್ ನ ನೀರನ್ನು ಪರಿಶೀಲಿಸುವ ಮೂಲಕ ವಿಶ್ಲೇಷಿಸಲಾಗುತ್ತದೆ.

 

ವಾತಾವರಣದ ಬಗ್ಗೆ ಕಠಿಬದ್ಧತೆ

 

ಫಿನೋಲೆಕ್ಸ್ ತನ್ನ ಪಿವಿಸಿ ಉತ್ಪಾದನಾ ಘಟಕ ಹಾಗೂ ಕ್ಯಾಪ್ಟಿವ್ ಪವರ್ ಪ್ಯಾಂಟ್ ನ ಪರಿಸರದಲ್ಲಿ 50000 ಕ್ಕಿಂತಲೂ ಅಧಿಕ ಮರಗಳನ್ನು ನೆಟ್ಟು ಸಂರಕ್ಷಿಸುತ್ತಿದೆ. ಅದರಲ್ಲಿ ಹಲವು ಹಣ್ಣು ನೀಡುವ ಮರಗಳಾದ ಮಾವು, ಚಿಕ್ಕು, ಗೇರು ಬೀಜ, ತೆಂಗಿನ ಕಾಯಿ ಕೂಡಾ ಇವೆ. ಪ್ರತೀ ವರುಷದ ಜೂನ್ 5 ರಿಂದ ಪ್ರಾರಂಭವಾಗುವ ಒಂದು ವಾರದ ವರ್ಲ್ಡ್ ಎನ್ ವಾಯರನ್ಮೆಂಟ್ ದಿನ ಆಚರಣೆಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳು ಜರಗುತ್ತವೆ.

 

ಮಳೆ ನೀರಿನ ಹಾರ್ವೆಸ್ಟಿಂಗ್ ಸಂಗ್ರಹಣೆ.

 

ಫಿನೋಲೆಕ್ಸ್ ಸಮೀಪದ ನದಿಗೆ ಒಂದು ಅಣೆಕಟ್ಟನ್ನು ನಿರ್ಮಿಸಿ ನಷ್ಟವಾಗಿ ಹೋಗುವ ನೀರನ್ನು ಘಟಕದಲ್ಲಿ ಸ್ಥಾಪಿಸಲಾದ ಎರಡು ಜಲಾಶಯಗಳಲ್ಲಿ ಸಂಗ್ರಹಿಸುತ್ತದೆ. ಮಳೆ ನೀರನ್ನು ಕೂಡಾ ಈ ಜಲಾಶಯಗಳಲ್ಲಿ ಶೇಖರಿಸಲಾಗುತ್ತದೆ. ಈ ಅಣೆಕಟ್ಟಿನಿಂದಾಗಿ ಸಮೀಪದ ಗ್ರಾಮಗಳ ಭೂಮಿಯೊಳಗಿನ ನೀರಿನ ಸ್ತರ(ಮಟ್ಟ) ಮೇಲ್ಮೈಯಲ್ಲಿರುತ್ತದೆ ಹಾಗೂ ಗ್ರಾಮದ ಜನರಿಗೆ ವರ್ಷವಿಡಿ ಕುಡಿಯುವ ನೀರಿನ ಪೂರೈಕೆಗೆ ಸಹಕಾರಿಯಾಗುತ್ತದೆ.

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.