ಸಮಾಜ ಕಲ್ಯಾಣ

ಮಹಿಳಾ ಸಬಲೀಕರಣ

ನಮ್ಮ ಸಮಾಜದಲ್ಲಿ ಮಹಿಳೆಯನ್ನು ಸಬಲೆಯನ್ನಾಗಿಸಲು ಮುಕುಲ್ ಮಾಧವ್ ಫೌಂಡೇಶನ್  ಗ್ರಾಮೀಣ ಮಹಿಳಾ ವಿಕಾಸ್ ಕೇಂದ್ರದ ಸ್ತ್ರೀಯರಿಗಾಗಿ ಹಾಗೂ ಮುಕುಲ್ ಮಾಧವ್ ವಿದ್ಯಾಲಯದ ವಿದ್ಯಾರ್ಥಿಗಳ ತಾಯಂದಿರಿಗಾಗಿ  ಕಂಪ್ಯೂಟರ್ ಕ್ಲಾಸ್ ಗಳನ್ನು ಪ್ರಾರಂಭಿಸಿತು.

ಜೂಲೈ 2013ರಲ್ಲಿ ಮುಕುಲ್ ಮಾಧವ್ ವಿದ್ಯಾಲಯದ ಆವರಣದಲ್ಲಿ ಅನುದಾನಿತ ದರದಲ್ಲಿ  ಕೋರ್ಸನ್ನು(ತರಗತಿಗಳನ್ನು) ಪ್ರಾರಂಭಿಸಲಾಯಿತು. ಈ ತರಗತಿಗಳನ್ನು  ಶಾಲೆಯ ಕಂಪ್ಯೂಟರ್ ಟೀಚರ್ ಗಳು ನಡೆಸುತ್ತಾರೆ.

ತಮ್ಮ ವಿದ್ಯಾರ್ಥಿಗಳ ತಾಯಂದಿರನ್ನು ಶೈಕ್ಷಣಿಕವಾಗಿ ದೃಢಗೊಳಿಸುವುದು ಹಾಗೂ ಇಂಗ್ಲೀಷ್ ಭಾಷೆಯನ್ನು ಪರಿಚಯಿಸುವುದು ನಾವು ಆದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಅವರಿಗಾಗಿ ಬೇಸಿಕ್ ಇಂಗ್ಲೀಷ್ ಟ್ರೈನಿಂಗ್ (ಪ್ರಾಥಾಮಿಕ ಇಂಗ್ಲೀಷ್ ತರಬೇತಿ)ನ್ನು ಪ್ರಾರಂಭಿಸಿದೆವು. ಇದರ ಜೊತೆಗೆ ಗ್ರಾಮೀಣ ಮಹಿಳೆಯರು ತಮ್ಮ ಆದಾಯದ ಉತ್ಪತ್ತಿಯ್ನು ಹೆಚ್ಚಿಸಲು ಗುಡಿ ಕೈಗಾರಿಕೆಯ ಕಾರ್ಯಾಗಾರವನ್ನು ಗ್ರಾಮೀಣ ಮಹಿಳಾ ವಿಕಾಸ ಕೇಂದ್ರದ ಸ್ತ್ರೀಯರಿಗಾಗಿ  ಏರ್ಪಡಿಸಿದ್ದೇವೆ.

ಹಳ್ಳಿಯ ಜನ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಆಯಾ ಗ್ರಾಮಗಳ ಗ್ರಾಮ ಪಂಚಾಯತ್ ಗಳ ನೆರವಿನಿಂದ ಗೋಲಾಪ್ ನ ಪಕ್ಕದ ಊರುಗಳಲ್ಲಿ ಕುಡಿಯುವ ನೀರನ್ನು ಪೂರೈಸುವ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ.

ರಾಷ್ಟ್ರೀಯ ಗ್ರಾಮೀಣ ಪೇಯಜಲ್ ಯೋಜನೆಯ ಮೂಲಕ ಫಿನೋಲೆಕ್ಸ್ ಕೋಲಂಬೆ ಭಾಟ್ಯೆ ಹಾಗೂ ಫ್ಯಾನ್ ಸೋಪ್ ಹಳ್ಳಿಗಳ ಗ್ರಾಮ ಪಂಚಾಯತ್ ಗಳಿಗೆ ಸಹಕರಿಸಿತು. ಈ ಯೋಜನೆಗಳು ಅನುಸ್ಥಾಪನೆಗೊಳ್ಳುವ ತನಕ ನಾವು ಪಂಪ್, ಪೈಪ್ ಲೈನ್ ಹಾಗೂ ವಾಟರ್ ಟ್ಯಾಂಕ್ ಗಳ ಮೂಲಕ ಬಾವಿಗಳಿಂದ ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯವನ್ನು ಏರ್ಪಡಿಸಿದೆವು.

ನೀರು ಪೂರೈಕೆಯ ಯೋಜನೆಗೆ ಬೇಕಾಗುವ ದುರಸ್ತಿಯ ವೆಚ್ಚ, ವಿದ್ಯುತ್ ಬಿಲ್ ಇತ್ಯಾದಿಗಳಗೆ ತಗಲುವ ಖರ್ಚಿಗಾಗಿ ಕಂಪೆನಿಯು ಗ್ರಾಮ ಪಂಚಾಯತ್ ಗಳಿಗೆ ಧನ ಸಹಾಯವನ್ನು ನೀಡುತ್ತಿದೆ.

ನೀರಿನ ಸಂರಕ್ಷಣೆ

ವರ್ಲ್ಡ್ ವಾಟರ್ ದಿನದಂತು ನಾವು ನಮ್ಮ ಡಿಜಿಟಲ್ ವೇದಿಕೆಯ ಮೂಲಕ ವೀಡಿಯೊ ಮಾಧ್ಯಮದಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸಿ ಜಾಗೃತಗೊಳಿಸಿದ್ದೇವೆ. ಯಾವ ರೀತಿ ತಮ್ಮ ದಿನನಿತ್ಯದ ಜೀವನದಲ್ಲಿ ಸಾಮಾನ್ಯ ಸೂಚನೆಗಳನ್ನು ಅನುಸರಿಸಿ ನೀರಿನ ಸಂರಕ್ಷಣೆಯನ್ನು ಮಾಡಬಹುದೆಂದು ನಾವು ಮಾರ್ಗದರ್ಶನ ನೀಡಿದ್ದೇವೆ. ಮಹಾರಾಷ್ಟ್ರವು ತೀವ್ರ ಬರಪೀಡಿತ ಪ್ರದೇಶವಾಗಿದ್ದು ಇಲ್ಲಿ ಅಧಿಕವಾಗಿ ನೀರಿನ ಕೊರತೆ ಇದೆ, ಆ ಕ್ಷಣದಲ್ಲಿ ನಾವು ಅಗತ್ಯವಿದ್ದ ರೈತರಿಗೆ ನೀರಿನ ಪೂರೈಕೆಯನ್ನು ಮಾಡಿದ್ದೇವೆ. ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಬರದಿಂದ ಅಧಿಕ ನೀರಿನ ಕೊರತೆ ಈ ವರ್ಷ ಕಂಡು ಬಂದಿದೆ. ಹಾಗಾಗಿ ನಾವು ನಮ್ಮ ನಗರಗಳ ಜನತೆಯೊಂದಿಗೆ ಗ್ರಾಮೀಣ ಜನರ ಸಂಪರ್ಕವನ್ನು ಹೆಚ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ನಾವು ಜನರಿಗೆ ನೀರನ್ನು ಉಳಿಸುವ ಪ್ರತಿಜ್ಞೆ ಮಾಡಿ ಆ ಉಳಿಸಿದ ನೀರನ್ನು ಮಹಾರಾಷ್ಟ್ರದ ಬರಗಾಲ ಪೀಡಿತ ಲಾತೂರ್ ಭಾಗಕ್ಕೆ ದಾನ ಮಾಡಿದ್ದೇವೆ.

ಜೂನ್ 5, 2015, ವರ್ಲ್ಡ್ ಎನ್ ವಾಯಿರನ್ ಮೆಂಟಿನ ದಿನದ ಸಂದರ್ಭದಲ್ಲಿ ನಾವು ನಮ್ಮ ಸೋಷಿಯಲ್ ಮೀಡಿಯಾ ವೇದಿಕೆಯ ಮೂಲಕ ಹೊಸ ಅವಿಷ್ಕಾರದ # ಪಾನೀ ಕೀ ತರಹ ಮತ್ ಬಹಾವೋ ಪ್ರಚಾರವನ್ನು ಪ್ರಾರಂಭಿಸಿದೆವು ಈ ಕ್ಯಾಂಪೆನ್ (ಪ್ರಚಾರದ) ಮೂಲಕ ವೀಡಿಯೋ ಮಾಧ್ಯಮದಲ್ಲಿ ನೀರಿನ ದುರ್ಬಳಕೆಯ ಹಾಗೂ ನೀರಿನ ಸಂರಕ್ಷ|ಣೆಯ ಪ್ರಾಮುಖ್ಯತೆಯ ಜನಜಾಗೃತಿ ಮೂಡಿಸಿದೆವು. ಕ್ಯಾಚ್ ಫ್ರೇಸ್ (ನುಡಿಮುತ್ತು) ಪಾನಿ ಕೋ # ಪಾನೀ ಕೀ ತರಹ್ ಮತ್ ಬಹಾವೊ ನೀರನ್ನು ರಕ್ಷಿಸಲು ಹಾಗೂ ವ್ಯರ್ಥ ಮಾಡದಂತೆ ಬಲವಾದ ಮನವಿಯನ್ನು ನೀಡುತ್ತೆ.

ಇಷ್ಟೇ ಅಲ್ಲದೆ, ಸಿ ಎಸ್ ಆರ್ ಚಟುವಟಿಕೆಗಳ ಭಾಗವಾಗಿ ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಫಿನೋಲೆಕ್ಸ್ ಒಂದು ಯೋಜನೆಯನ್ನು ಕೈಗೊಂಡಿರುತ್ತದೆ. ಪರಿಣಾಮವಾಗಿ, ಭಾಟ್ಯೆ ಗ್ರಾಮದ ಒಂದು ಭಾವಿಯಲ್ಲಿ ವಾಟರ್ ಫಿಲ್ಟ್ರೇಶನ್ ಯೂನಿಟ್ (ನೀರು ಶುದ್ಧೀಕರಿಸುವ ಘಟಕ)ವನ್ನು ಅನುಸ್ಥಾಪಿಸಿರುವುದರಿಂದ ಹಳ್ಳಿಯ ಜನರಿಗೆ ತುಂಬಾ ಲಾಭವಾಗಿದೆ.

 

 

ಗ್ಯಾಲರಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.