ಸಮರ್ಥನೀಯತೆ

ಕಂಪೆನಿಯು ಯಾವಾಗಲೂ ತಾವು ಮಾಡುವ ವ್ಯಾಪಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಒಂದು ಅವಿಭಾಜ್ಯ ಅಂಗವಾಗಿದೆ. ಕೇವಲ ನಾವು ಉತ್ಪಾದಿಸುವ ಉತ್ಪನ್ನಗಳಲ್ಲಿ ಮಾತ್ರವಲ್ಲ, ನಾವು ವಾತಾವರಣದ ಬಗ್ಗೆ ಒಪ್ಪಿಕೊಂಡ ತತ್ವಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ಆಡಳಿತದ ಬಗ್ಗೆಯೂ. ಫಿನೋಲೆಕ್ಸ್ ಎನರ್ಜಿ ಇಂದನ ಹಾಗೂ ಸಂಪನ್ಮೂಲಗಳ ಸಂರಕ್ಷಣೆಗೆ ಅತ್ಯಂತ ಕಾಳಜಿ ವಹಿಸುತ್ತದೆ. ಎನರ್ಜಿ(ಇಂಧನ)ಯ ರಕ್ಷಣೆ ಹಾಗೂ ಅದನ್ನು ಅತ್ಯುತ್ತಮವಾಗಿಸುವುದಾಗಿರಬಹುದು. ನಮ್ಮ ಸಂಪೂರ್ಣ ಧ್ಯೇಯ ಸ್ಥಿರತೆಯನ್ನು ಕಾಪಾಡುವುದು. ಈ ನಮ್ಮ ಕಾರ್ಯವನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪಾರಿತೋಷಕಗಳನ್ನು ನೀಡುವುದರ ಮೂಲಕ ಗುರುತಿಸಲಾಗಿದೆ.

ಇತ್ತೀಚಿನ ಗುರುತಿಸುವಿಕೆ

ಬೆಸ್ಟ್ ಸೇಫ್ಟಿ ಪ್ರಾಕ್ಟೀಸಸ್ ಅವಾರ್ಡ್ 2015 – ನೇಶನಲ್ ಸೇಫ್ಟೀ ಕೌನ್ಸಿಲ್

ಗ್ರೀನ್ ಮ್ಯಾನುಪ್ಯಾಕ್ಚರಿಂಗ್ ಎಕ್ಸಲೆನ್ಸ್ ಅವಾರ್ಡ್ 2014: ಮೆರಿಟ್ ಪ್ರಮಾಣಪತ್ರ, ಫ್ರಾಸ್ಟ್ನ ನಂಬಿಕೆಯ ವರ್ಗ & ಸುಲ್ಲಿವಾನ್.

ವರ್ಷದ ವರ್ಷದ ನೀರಿನ ಕಂಪನಿ ನ್ಯಾಷನಲ್ ಸಿಎಸ್ಆರ್ ಲೀಡರ್ಶಿಪ್ ಕಾಂಗ್ರೆಸ್ನಿಂದ & ಪ್ರಶಸ್ತಿಗಳು

ಬ್ಲ್ಯೂವರ್ಟ್ ಗ್ಲೋಬಲ್ ಸಿಎಸ್ಆರ್ ಎಕ್ಸಲೆನ್ಸ್ ಅಂಡ್ ಲೀಡರ್ಶಿಪ್ ಅವಾರ್ಡ್ ಫಾರ್ “ಬೆಂಬಲ & ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆ”

ವಾತಾವರಣ

ಫಿನೋಲೆಕ್ಸ್ ನಲ್ಲಿ ನಾವು ಪರಿಸರ ಸಮತೋಲನವನ್ನು ಗೌರವಿಸುತ್ತೇವೆ, ರಕ್ಷಿಸುತ್ತೇವೆ ಹಾಗೂ ಅದನ್ನು ಖಾಯಂ ಆಗಿರಿಸಲು ಪ್ರಯತ್ನಿಸುತ್ತೇವೆ. ವಾತಾವರಣದ ರಕ್ಷಣೆಯು ನಮ್ಮೆಲ್ಲಾ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದೆ.ವಾತಾವರಣ ನಿರ್ವಹಣಾ ವಿಭಾಗವು (ಸೆಲ್) ನಮ್ಮೆಲ್ಲಾ ಘಟಕಗಳಲ್ಲಿ ಆಡಳಿತ ಮಂಡಳಿಯ ನಿಗಾದಲ್ಲಿ ಆಡಿಟ್ ಮಾಡಿಕೊಂಡು, ವಾತಾವರಣ ಮಾಲಿನ್ಯದ ಬಗ್ಗೆ ಇರುವ ಎಲ್ಲಾ ಮೌಲ್ಯಮಾಪನಗಳನ್ನು ಪರಿಶೀಲಿಸುತ್ತದೆ ಹಾಗೂ ನಿಯಂತ್ರಣದಲ್ಲಿಡುತ್ತದೆ. ನಮ್ಮ ರತ್ನಗಿರಿ ಘಟಕವು ಐ ಎಸ್ ಓ 1400:2015 ಪ್ರಮಾಣಪತ್ರವನ್ನು ಜರ್ಮನಿಯ ಟೀ. ಯೂವಿ ಯಿಂದ ಪಡೆದಿದೆ ಹಾಗೂ ಅದೇ ತರಹದ ಮಾರ್ಗದರ್ಶನಗಳ ನಮ್ಮೆಲ್ಲ ಘಟಕಗಳಲ್ಲಿ ಕಾರ್ಯ ಪ್ರವೃತ್ತರಾಗಿವೆ. ಲೋಹಗಳ ಅವಶ್ಯಕತೆಯ ಬದಲಿಗೆ ನಮ್ಮ ಪಾಲಿಮರ್ ಉತ್ಪನ್ನಗಳು ಮೇಲ್ಮೈಯನ್ನು ಸವೆತಗಳಿಂದ ರಕ್ಷಿಸುತ್ತವೆ ಹಾಗೂ ಸವೆತರಹಿತ, ಸರಾಗವಾದ ಇಂಧನ ದಕ್ಷತೆಯೊಂದಿಗೆ ನೀರನ್ನು ಹರಿಸಲು ಮತ್ತು ಹೆಚ್ಚು ಬಾಳ್ವಿಕೆಯನ್ನು ನೀಡುತ್ತವೆ.

ಮಾಲಿನ್ಯ ನಿಯಂತ್ರಣ

ನಮ್ಮ ಪಿವಿಸಿ ರೆಸಿನ್ ಘಟಕಗಳು ಗಣಕೀಕೃತ (ಕಂಪ್ಯೂಟರೈಸ್ಡ್) ನಿಯಂತ್ರಣಗಳಲ್ಲಿ ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತವೆ. ಸಂಸ್ಕರಿಸದ, ಅನಿಯಂತ್ರಿತ ಹೊರ ಸೂಸುವಿಕೆಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಲಾಗುವುದಿಲ್ಲ. ಸ್ಟ್ಯಾಕ್ ಅನಿಲಗಳು ಮತ್ತು ಚಿಮಣಿಯ ದ್ವಾರಗಳನ್ನು ಅಧಿಕೃತವಾದ ಸ್ವತಂತ್ರ ಏಜನ್ಸಿಗಳು ಮೇಲ್ವಿಚಾರಣೆ ಮಾಡುತ್ತವೆ. ಪವರ್ ಪ್ಲಾಂಟ್ ನ ಫ್ಲೂ ಅನಿಲಗಳು ಸ್ಟ್ಯಾಕ್ ಅಲ್ಲದೆ ಜಲೀಯ ತ್ಯಾಜ್ಯಗಳನ್ನು ಸ್ಟೇಟ್ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್ ನ ಮೂಲಕ ಆನ್ ಲೈನ್ ಮೋನಿಟರಿಂಗ್ ಸಿಸ್ಟಮ್ ನಲ್ಲಿ ನಿಗಾವಿರಿಸುವ ವ್ಯವಸ್ಥೆಯನ್ನು ಮಾಡುವ ಸಂಪರ್ಕವನ್ನು ಮಾಡಲಾಗಿದೆ. ರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ ಘಟಕಗಳ ಆವರಣದ ಗಾಳಿಯ ಗುಣಮಟ್ಟದ ಮೇಲ್ವಿಚಾರಣೆ ಮಾಡಲಾಗುತ್ತದೆ. ಬೇರೆ ಬೇರೆ ಸ್ಥಳಗಳಿಂದ ವರ್ಷವಿಡೀ ನಿರಂತರವಾಗಿ ಗಾಳಿಯ ಮಾದರಿ (ಸ್ಯಾಂಪಲ್)ಗಳನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ.

 

ನೀರಾವರಿ ಯೋಜನೆಗಳು

 

ಅಣೆಕಟ್ಟುಗಳು

ಫಿನೋಲೆಕ್ಸ್ ರತ್ನಗಿರಿ ಘಟಕದಿಂದ 7 ಕಿ. ಮೀ. ದೂರದಲ್ಲಿರುವ ಥೊರ್ಲಿ ನದಿಗೆ ಅಣೆಕಟ್ಟನ್ನು ನಿರ್ಮಿಸಿದೆ. ಈ ಅಣೆಕಟ್ಟಿನ ಮೂಲಕ ಮಳೆಯ ನೀರು ಸಮುದ್ರಕ್ಕೆ ಹರಿಯುವುದನ್ನು ತಡೆದು ಮರು ಬಳಕೆ ಮಾಡಲಾಗುತ್ತದೆ. ಇದು ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲದಡಿಯ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

 

ಮಳೆ ನೀರಿನ ಪುರ್ನಬಳಕೆಯ ಯೋಜನೆ

ರತ್ನಗಿರಿಯಲ್ಲಿರುವ ಘಟಕದಲ್ಲಿ ಫಿನೋಲೆಕ್ಸ್ ಪ್ರತಿಯೊಂದು 3.0 ಲಕ್ಷ ಕ್ಯೂಬಿಕ್ ಮೀಟರ್ ಸಾಮರ್ಥ್ಯವಿರುವ ಎರಡು ಮೇಲ್ಮೈ ನೀರಿನ ಜಲಾಶಯಗಳನ್ನು ಜಿಯೋಮೆಂಬ್ರೆನ್ ನೊಂದಿಗೆ ನಿರ್ಮಿಸಿದೆ. ಈ ಜಲಾಶಯಗಳು ನೈರ್ಸಗಿಕ ಭೂಪ್ರದೇಶಗಳನ್ನು ಬಳಸಿಕೊಂಡು ಗರಿಷ್ಟ ಮಟ್ಟದಲ್ಲಿ ಮಳೆ ನೀರನ್ನು ಸಂಗ್ರಹಿಸುತ್ತವೆ.

 

ಹೊರಹಾಕುವುದರ ಮರುಬಳಕೆ

ರತ್ನಗಿರಿಯ ಘಟಕದಲ್ಲಿ ಪ್ರತೀದಿನ ಹೊರಹಾಕುವ 3000 ಕ್ಯೂಬಿಕ್ ಮೀಟರ್ ತ್ಯಾಜ್ಯಗಳಲ್ಲಿ ಸುಮಾರು 50 ಶೇಕಡಾವನ್ನು ಬೋಯ್ಲರ್ ಫೀಡ್ ನೀರನ್ನಾಗಿ ಮಾರ್ಪಡಿಸಿ, ಘಟಕಗಳಲ್ಲಿ ಮರುಬಳಕೆಯಾಗುತ್ತಿದೆ.

ಉಳಿದ ತ್ಯಾಜ್ಯಗಳನ್ನು ಮಹಾರಾಷ್ಟ್ರ ಪೊಲ್ಯೂಶನ್ ಕಂಟ್ರೋಲ್ ಬೋರ್ಡಿನ ಮಾನದಂಡಗಳ ಅನುಸಾರವಾಗಿ ನಮ್ಮ ಅತ್ಯಾಧುನಿಕ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಪ್ರೈಮರೀ, ಸೆಕೆಂಡರಿ ಹಾಗೂ ಟೆರ್ರಿಟೇರಿ ನಿರ್ವಹಣಾ ಸೌಲಭ್ಯಗಳ ಮೂಲಕ ಉತ್ತಮ ರೀತಿಯಲ್ಲಿ ನಿರ್ವಹಣಾ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

ಫಿನೋಲೆಕ್ಸ್ ಜೀರೋ ಲಿಕ್ವಿಡ್ ತ್ಯಾಜ್ಯ ಹೊರಸೂಸುವಿಕೆಯ ತತ್ವಗಳ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ನಮ್ಮ ಘಟಕಗಳಿಂದ ಪರಿಶೀಲಿಸದೇ ಇದ್ದ ತ್ಯಾಜ್ಯಗಳನ್ನು ಯಾವುದೇ ಕಾರಣಕ್ಕೂ ಹೊರ ಹಾಕುವ ಅನುಮತಿಯನ್ನು ನೀಡುವುದಿಲ್ಲ. ಘಟಕಗಳಲ್ಲಿ ದಿನದ 24 ಗಂಟೆಗಳಲ್ಲಿ ಜಾಗರೂಕತೆಯಿಂದ ಈ ಪ್ರಕ್ರಿಯೆಯನ್ನು ಪರೀಕ್ಷಿಸಲಾಗುತ್ತದೆ.

 

ಗ್ರೀನ್ ಬೆಲ್ಟ್

ಘಟಕದ ಪರಿಸರದಲ್ಲಿ 1990 ರ ಮೊದಲಿದ್ದ ಬಂಜರು ಜಮೀನನ್ನು ಇಂದು ಹಚ್ಚ ಹಸುರಾದ ಫಲವತ್ತಾದ ಭೂಮಿಯನ್ನಾಗಿ ಮಾರ್ಪಡಿಸಿದ್ದೇವೆ. ಸುಮಾರು 50,000 ಕ್ಕಿಂತಲೂ ಅಧಿಕ ಬೇರೆ ಬೇರೆ ತಳಿಯ ಮಾವು, ಗೇರು ಬೀಜ, ತೆಂಗು ಹಾಗೂ ಅಕೇಶಿಯಾದ ಮರಗಳನ್ನು ಸುಮಾರು 150 ಎಕರೆ ಜಮೀನಿನಲ್ಲಿ ನಟ್ಟಿದ್ದೇವೆ.

 

ಘನ ತ್ಯಾಜ್ಯದ ನಿರ್ವಹಣೆ

ಫಿನೋಲೆಕ್ಸ್ ತನ್ನ ಘಟಕಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಘನತ್ಯಾಜ್ಯ ನಿರ್ವಹಣೆಯನ್ನು ಮಾಡುವಲ್ಲಿ ಕಟಿಬದ್ಧವಾಗಿದೆ. ಎಲ್ಲಾ ಹಾನಿಕಾರಕ ತ್ಯಾಜ್ಯಗಳನ್ನು ತಲೋಜದಲ್ಲಿರುವ ಮುಂಬೈ ವೇಸ್ಟ್ ಮಾನೇಜ್ಮೆಂಟಿನಂತಹ ಮೂಲಕ ವಿಲೇವಾರಿ ಮಾಡುತ್ತೇವೆ. ಇಲೇಕ್ಟ್ರಾನಿಕ್ ತ್ಯಾಜ್ಯಗಳನ್ನು, ಮಹಾರಾಷ್ಟ್ರ ಪೊಲ್ಯೂಶನ್ ಕಂಟ್ರೋಲ್ ಬೋರ್ಡಿನಿಂದ ಅಧಿಕೃತವಾಗಿ ಅನುಮೋದಿಸಲಾದ ಸೌಕರ್ಯಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ.

ಕ್ಯಾಂಟೀನ್ ತ್ಯಾಜ್ಯಗಳನ್ನು ಮೆಶೀನ್ ಗಳ ಮೂಲಕ ಪ್ರಕ್ರಿಯೆಗಳಿಗೆ ಒಳಪಡಿಸಿ ಸಾವಯವ ಗೊಬ್ಬರಗಳನ್ನಾಗಿ ಮಾರ್ಪಡಿಸುತ್ತೇವೆ (ಪರಿವರ್ತಿಸುತ್ತೇವೆ) ಹಸಿರು ಕಸಗಳನ್ನು ಪುಡಿ ಮಾಡಿ ಉಂಡೆಗಳನ್ನಾಗಿ ಪರಿವರ್ತಿಸಿ ನಮ್ಮ ಕ್ಯಾಂಟೀನ್ ಗಳಲ್ಲಿ ಇಂಧನದ ರೂಪದಲ್ಲಿ ಉಪಯೋಗಿಸಲಾಗುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯಗಳ ಉತ್ಪನ್ನವನ್ನು ಕನಿಷ್ಟವಾಗಿಸುವುದು ನಮ್ಮ ನೀತಿ. ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಪೂರ್ಣವಾಗಿ ವಿಂಗಡಿಸಿ ಮರುಬಳಕೆ ಮಾಡಲಾಗುತ್ತದೆ.

 

ಶಬ್ಧ ಮಾಲಿನ್ಯ

ಎಲ್ಲಾ ಘಟಕಗಳಲ್ಲಿ ಆಯಾಯ ರಾಜ್ಯಗಳ ಅಧಿಕಾರಿಗಳು ಸೂಚಿಸಲಾದ ಶಬ್ಧ ಮಾಲಿನ್ಯದ ಮಟ್ಟವನ್ನು ಕಾಪಾಡುವಂತೆ ಖಚಿತಪಡಿಸಿಕೊಳ್ಳಲಾಗುತ್ತದೆ. ಶಬ್ಧದ ಮಟ್ಟಗಳನ್ನು ಘಟಕಗಳ ಬೇರೆ ಬೇರೆ ಪ್ರದೇಶಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಧಿಕ ಶಬ್ಧದ ಪ್ರದೇಶಗಳಲ್ಲಿ ಅಂದರೆ ಕಂಪ್ರೆಸ್ಸರ್ ಮತ್ತು ಬ್ಲೋವರ್ ಘಟಕಗಳಲ್ಲಿ ಎಚ್ ಎಸ್ ಈ ಮಾರ್ಗದರ್ಶನಗಳಂತೆ (ಮೌಲ್ಯಮಾಪನಗಳಂತೆ) ಕಿವಿಗೆ ರಕ್ಷಣೆಯನ್ನು ನೀಡುವುದು (ಇಯರ್ ಮಫ್ಸ್ ಮತ್ತು ಇಯರ್ ಪ್ಲಗ್ಸ್) ಕಡ್ಡಾಯವಾಗಿ ಅಗತ್ಯವಾಗಿದೆ.

 

ಇಂಧನದ ಉಳಿತಾಯ ಮತ್ತು ಬೇರೆ ಉಪಕ್ರಮಗಳು

ಕಚ್ಛಾ ವಸ್ತುಗಳ ಹಾಗೂ ರಾಸಾಯನಿಕ ಬಳಕೆಗಳ ಕೂಲಂಕುಷವಾಗಿ ಪರೀಕ್ಷಿಸಲಾಗುತ್ತದೆ ಹಾಗೂ ಕನಿಷ್ಟ ನಷ್ಟವಾಗುವಂತೆ ನೋಡಿಕೊಳ್ಳಲಾಗುತ್ತದೆ. ಫಿನೋಲೆಕ್ಸ್ ಬಳಕೆಯ ಅಂಕಿ ಅಂಶಗಳು. ಜಗತ್ತಿನ ಇದೇ ತರಹದ ಉದ್ಯಮಗಳ ಮಾನದಂಡಗಳ ತುಲನಾತ್ಮಕದಂತಿದೆ.

ಸೋಲಾರ್ ಪ್ಯಾನಲ್ ಗಳನ್ನು ಸ್ಥಾಪಿಸಿ ಇಂಧನದ ಮರುಬಳಕೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಅಷ್ಟೇ ಅಲ್ಲದೆ ಇಂಧನದ ಉಳಿತಾಯ ಮಾಡುವುದಕ್ಕಾಗಿ ನಾವು ನಮ್ಮ ಲೈಟ್ಟಿಂಗ್ಸ್ ಗಳಲ್ಲಿ ಎಲ್ ಈ ಡೀಯನ್ನು ಬಳಸುತ್ತೇವೆ.

 

ಆರೋಗ್ಯ

ಉದ್ಯೋಗಿಯ (ನೌಕರರ) ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಫಿನೋಲೆಕ್ಸ್ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ನಾವು ಉದ್ಯೋಗಕ್ಕೆ ಸೇರುವ ಹೊಸ ನೌಕರರ ಫ್ರೀ ಎಂಪ್ಲಾಯ್ ಮೆಂಟ್ ಮೆಡಿಕಲ್ ಎಕ್ಸಾಮಿನೇಶನ್ ಗಳಾದ ಜನರಲ್ ಎಕ್ಸಾಮಿನೇಶನ್, ಹಿಮೋಗ್ರಾಮ್, ಅವರ್ ಫಂಕ್ಷನ್ ಟೆಸ್ಟ್, ಬ್ಲಡ್ ಶುಗರ್ ಲೆವೆಲ್ ಮೋನಿಟರಿಂಗ್ ಇತ್ಯಾದಿಗಳನ್ನು ಮಾಡುತ್ತೇವೆ.

ಸಾಮಾನ್ಯವಾಗಿ ನಾವು ಉದ್ಯೋಗಿಯ ಯೋಗಕ್ಷೇಮದ ವಾರ್ಷಿಕ ವರದಿಗಳನ್ನು ಅನುಸರಿಸುತ್ತೇವೆ. ಡಾಕ್ಟರರ ಶಿಫಾರಸಿನ ಮೇರೆಗೆ ಉದ್ಯೋಗಿಯ ಪ್ರಸ್ತುತ ತಪಾಸಣೆಯ ವಿವರ ಸಿಗುತ್ತದೆ. ನಮ್ಮ ಒಕ್ಯುಪೇಶನಲ್ ಹೆಲ್ತ್ ಸೆಂಟರಿನಲ್ಲಿ ಯೋಗಕ್ಷೇಮದ ನಿಗಾ ಇಡಲಾಗುತ್ತದೆ. ರತ್ನಗಿರಿಯ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ 6 ಬೆಡ್ ಗಳು ಹಾಗೂ 24 ಗಂಟೆ ಸೇವಾ ನಿರತರಾಗಿರುವ ದಕ್ಷ ಪುರುಷ ನರ್ಸ್ ಗಳು (ಮೇಲ್ ನರ್ಸ್) ಸೌಲಭ್ಯವಿದೆ. ಎಲ್ಲಾ ಸಮಯದಲ್ಲೂ ಡಾಕ್ಟರ್ ಗಳು ಉಪಲಬ್ಧವಿದ್ದಾರೆ.

 

ಬೆಂಕಿಯ ಸುರಕ್ಷತೆ

ಆಪತ್ಕಾಲದ ತಯಾರಿಕೆಯ ಬಗ್ಗೆ ತಿಳಿಸಲು ನಾವು ಅಣುಕು ಕ್ರಿಯೆ (ಮೋಕ್ ಡ್ರಿಲ್ಸ್) ಹಾಗೂ ಬೆಂಕಿಯ ಪ್ರಕ್ರಿಯೆ (ಫಯರ್ ಡ್ರಿಲ್ಸ್) ಗಳನ್ನು ನಿರಂತರವಾಗಿ ನಡೆಸುತ್ತೇವೆ. ಫಿನೋಲೆಕ್ಸ್ ಫೈರ್ ಏಂಡ್ ಸೇಫ್ಟಿ ವಿಭಾಗವು ಉತ್ತಮ ಫೈರ್ ಫೈಟಿಂಗ್ ಉಪಕರಣಗಳು ಹಾಗೂ ಸ್ವಯಂ ರಕ್ಷಣಾ ಉಪಕರಣಗಳನ್ನು ಹೊಂದಿದೆ. ಮನುಷ್ಯಚಾಲಿತ ಕರೆ ಕೇಂದ್ರಗಳು (ಎಮ್ ಸೀ ಪೀ) ಗಳು ಬೇರೆ ಬೇರೆ ವಿಭಾಗಗಳಲ್ಲಿರುವುದು ಸುಲಭ ಸಂಪರ್ಕಕ್ಕೆ ಸಹಕಾರಿಯಾಗಿವೆ. ಯಾವುದೇ ಅನಾಹುತಗಳನ್ನು ಹತೋಟಿಯಲ್ಲಿರಿಸಲು ಪೂರ್ಣ ಪ್ರಮಾಣದಲ್ಲಿ ಉಪಕರಣಗಳನ್ನೊಳಗೊಂಡ ಮೂರು ಫೈರ್ ಟೆಂಡರ್ ಗಳು ದಿನದ 24 ಗಂಟೆಗಳಲ್ಲೂ ಉಪಲಬ್ಧವಿದೆ, ಹೆಡರ್ ಪ್ರೆಶರ್ ಡ್ರಾಪ್ ನ ಆಧಾರದ ಮೇಲೆ ಬೇಕಾದ ಪ್ರಮಾಣದಲ್ಲಿ ನೀರನ್ನು ಸರಬರಾಜು ಮಾಡಲು ಸೂಕ್ತವಾದ ಫೈರ್ ವಾಟರ್ ಪಂಪ್ ಗಳು ಉಪಲಬ್ಧವಿದೆ. ಆಪತ್ಕಾಲೀನ ನಿರ್ವಹಣಾ ಪ್ರಕ್ರಿಯೆಗಳನ್ನು ಘಟಕಗಳಲ್ಲಿ ಸರಾಗವಾಗಿ ಅಭ್ಯಸಿಸಲಾಗುತ್ತದೆ.

 

ಉದ್ಯೋಗವಕಾಶ

ನಮ್ಮ ಧ್ಯೇಯ ಒಟ್ಟಾಗಿ ಬೆಳೆಯುವುದು ತನ್ಮೂಲಕ ಪರಿಸರದಲ್ಲಿ ನೆಲಸಿರುವ ಸಮುದಾಯಗಳ ಬೆಳವಣಿಗೆಗೆ ಹಾಗೂ ಏಳಿಗೆಯೇ ಫಿನೋಲೆಕ್ಸ್ ನ ಮೂಲ ಮಂತ್ರ. ನಮ್ಮ ರತ್ನಗಿರಿಯ ಉತ್ಪಾದನಾ ಘಟಕದಲ್ಲಿರುವ 600 + ಉದ್ಯೋಗಿಗಳ ಪೈಕಿ 70% ಉದ್ಯೋಗಿಗಳು ಆಸುಪಾಸಿನ ಪ್ರದೇಶಗಳ ಅಂದರೆ ರತ್ನಗಿರಿ ಜಿಲ್ಲೆ ಹಾಗೂ ಕೊಂಕಣ್ ಭಾಗ (ರೀಜನ್) ದವರಾಗಿದ್ದಾರೆ.

ನಮ್ಮ ಚಟುವಟಿಕೆಗಳನ್ನು ಅವಲಂಬಿಸಿಕೊಂಡು ಪರೋಕ್ಷವಾಗಿ ಹಲವಾರು ಉದ್ಯೋಗಗಳು ಸೃಷ್ಟಿಯಾಗಿವೆ ಹಾಗೂ ಇವುಗಳಿಂದ ಆಸುಪಾಸಿನ ಪ್ರದೇಶಗಳೂ ಅಭಿವೃದ್ಧಿಗೊಂಡಿವೆ.

 

ಕೌಶಲ್ಯ ಅಭಿವೃದ್ಧಿ

ದೇಶದ ಪಿವಿಸಿ ಉತ್ಪಾದಿಸುವ ಘಟಕಗಳಲ್ಲಿ ಎರಡನೇ ದೊಡ್ಡ ಘಟಕವನ್ನು ಸುರಕ್ಷತೆ ಹಾಗೂ ಕುಶಲತೆಯಿಂದ ಸಂಚಾಲನೆ ಮಾಡಲು ದಕ್ಷ, ಸಮರ್ಥ ಉದ್ಯೋಗಗಳ ಅವಶ್ಯಕತೆ ಇದೆ. ಹಾಗಾಗಿ ವಿದ್ಯಾವಂತ, ಸಮರ್ಥ ಮಾನವ ಶಕ್ತಿಗಳಿರುವುದು ಫಿನೋಲೆಕ್ಸ್ ಅತ್ಯಂತ (ವರ್ಕ್ಫೋರ್ಸ್) ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ತಾಂತ್ರಿಕ ಕ್ಷಮತೆಯಲ್ಲಿ ಅಂತರ (ಗ್ಯಾಫ್ಸ್) ಕಂಡರೆ ಆ ಅಂತರಗಳನ್ನು ಆಂತರಿಕ ಬಾಹ್ಯ ತರಬೇತಿ ಕಾರ್ಯಕ್ರಮಗಳ ಮೂಲಕ ಸೂಕ್ತವಾಗಿ ತರಬೇತಿ ಗೊಳಿಸಿ ತುಂಬಿಸುತ್ತೇವೆ.

 

ಸಿ ಎಸ್ ಆರ್

ನಮ್ಮ ಸಿ ಎಸ್ ಆರ್ ಚಟುವಟಿಕೆಗಳು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಸಮುದಾಯಗಳ ಅಬಿವೃದ್ಧಿ ಹಾಗೂ ನೀರಿನ ಪೂರೈಕೆಗಳು ಕೇಂದ್ರಿಕೃತವಾಗಿವೆ. ಫಿನೋಲೆಕ್ಸ್ ರತ್ನಗಿರಿಯಲ್ಲಿ ಒಂದು ತಾಂತ್ರಿಕ ಮಹಾವಿದ್ಯಾಲಯ (ಇಂಜಿನಿಯರಿಂಗ್ ಕಾಲೇಜ್) ಹಾಗೂ ಘಟಕದ ಕ್ಷೇತ್ರದಲ್ಲಿ ಒಂದು ಇಂಗ್ಲೀಷ್ ಮಾಧ್ಯಮ ಶಾಲೆಯು ಕಾರ್ಯನಿರ್ವಹಿಸುತ್ತದೆ (ನಡೆಯುತ್ತದೆ) ಅದೇ ರೀತಿ ಪರಿಸರದ ಶಾಲೆಗಳಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದೆ.

ನಮ್ಮ ಅಕ್ಕ ಪಕ್ಕದಲ್ಲಿ ಮೂಲಭೂತ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ನಾವು ಆರೋಗ್ಯ ಶಿಬಿರಗಳು,, ಮಾಮ್ಮೋಗ್ರಾಫಿ ಕೇಂದ್ರಗಳ ಕಾರ್ಯ ಚಟುವಟಿಕೆಗಳು, ಸೆರೆಬ್ರೆಲ್ ಪಾಲ್ಸಿಯವರಿಗೆ ಫಿಸಿಯೋಥೆರಪಿ ಕೇಂದ್ರಗಳನ್ನು ನಡೆಸುತ್ತೇವೆ.
ಪರಿಸರದ ಗ್ರಾಮಗಳಿಗಾಗಿ ಹಲವಾರು ಸಮುದಾಯ ಅಬಿವೃದ್ಧಿ ಯೋಜನೆಗಳಾದ ಮಹಿಳಾ ಕೌಶಲ್ಯಾಭಿವೃದ್ಧಿ, ದೇವಸ್ಥಾನಗಳ ನಿರ್ಮಾಣಕ್ಕಾಗಿ ಧನ ಸಹಾಯ ಇತ್ಯಾದಿಗಳನ್ನು ಮಾಡುತ್ತಿದ್ದೇವೆ. ನಮ್ಮ ಪರಿಸರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ರಾಷ್ಟ್ರೀಯ ಗ್ರಾಮೀಣ ಪೇಯಜಲ ಯೋಜನೆಗೆ ನಾವು ಕೊಡುಗೆಯನ್ನು ನೀಡುತ್ತಿದ್ದೇವೆ.

 

ಆಡಳಿತ ವ್ಯವಸ್ಥೆ (ಗವರ್ನೆನ್ಸ್)

ನಮ್ಮ ಕಾರ್ಪೋರೇಟ್ ಆಡಳಿತ ವ್ಯವಸ್ಥೆಯು ನಮ್ಮ ಪಾಲುದಾರರೊಂದಿಗಿನ ಸಂಬಂಧ ನಮ್ಮ ಸಂಸ್ಕೃತಿ, ಹಾಗೂ ನೀತಿಗಳಿಗೆ ಮಹತ್ವ ಭೂಮಿಕೆಯನ್ನು ಒಳಗೊಂಡಿದೆ. ನಮ್ಮ ಕಾರ್ಪೋರೇಟ್ ಆಡಳಿತದ ಕಾರ್ಯವೈಖರಿಯಲ್ಲಿ ಸಮಗ್ರತೆ ಹಾಗೂ ಪಾರದರ್ಶಕತೆಯಿದ್ದು ನಮ್ಮ ಪಾಲುದಾರರ ನಂಬಿಕೆಯನ್ನು ಗಳಿಸಿ ಉಳಿಸುವುದನ್ನು ಖಚಿತಗೊಳಿಸುತ್ತದೆ. ನಮ್ಮ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯು ನಮ್ಮ ಆರ್ಥಿಕ ಸ್ಥಿತಿ ಹಾಗೂ ಕಾರ್ಯ ಕ್ಷಮತೆಗಳ ಬಗ್ಗೆ ವಿವರವಾದ ಸೂಕ್ತ ಮಾಹಿತಿಯನ್ನು ಮತ್ತು ಫಿನೋಲೆಕ್ಸ್ ಆಡಳಿತ ವ್ಯವಸ್ಥೆಗಳ ಖುಲಾಸೆಯನ್ನು ಪಾಲುದಾರರಿಗೆ ಸಮಯಕ್ಕೆ ಸರಿಯಾಗಿ ಒದಗಿಸುತ್ತೇವೆ. (ಚೆನ್ನಾಗಿ ತಿಳಿಸುವ ಸಕ್ರಿಯವಾದ ಹಾಗೂ ಸ್ವತಂತ್ರ ಮಂಡಳಿ (ಇಂಡಿಪೆಂಡೆಂಟ್ ಬೋರ್ಡ್) ಉತ್ತಮ ದರ್ಜೆಯ ಕಾರ್ಪೋರೇಟ್ ಆಡಳಿತ ವ್ಯವಸ್ಥೆಗಾಗಿ ಇರುವುದು ಅತೀ ಅಗತ್ಯವೆಂಬುದು ನಮ್ಮ ನಂಬಿಕೆ.

ಫಿನೋಲೆಕ್ಸ್ ನಲ್ಲಿ ನಮ್ಮ ಮಂಡಳಿಯ ನಿರ್ದೇಶಕ (ಬೋರ್ಡ್ ಆಫ್ ಡೈರೆಕ್ಟರ್ಸ್) ರೈ ನಮ್ಮ ಕಾರ್ಪೋರೇಟ್ ಆಡಳಿತ ವ್ಯವಸ್ಥೆಯ ಮುಖ್ಯ ಸದಸ್ಯರಾಗಿರುತ್ತಾರೆ. ನಮ್ಮ ಪಾಲುದಾರರ ದೀರ್ಘಕಾಲದ ಆಸಕ್ತಿಗಳನ್ನು ರಕ್ಷಿಸಲಿಕ್ಕಾಗಿ ಮಂಡಳಿಯ ಆಡಳಿತದ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತದೆ.

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.