ಫಿನಲೆಕ್ಸ್ ಇಂಡಸ್ಟ್ರೀಸ್ ಬಗ್ಗೆ

ಫಿನಲೆಕ್ಸ್ ಇಂಡಸ್ಟ್ರೀಸ್ ಬಗ್ಗೆ

ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪಿವಿಸಿ-ಯು ಪೈಪ್ ಹಾಗೂ ಫಿಟ್ಟಿಂಗ್ಸ್ ನ ಉತ್ಪಾದನೆಯಲ್ಲಿ ಭಾರತದ ಪ್ರಮುಖ ಕಂಪೆನಿಯಾಗಿದೆ. ಹಾಗೂ ಪಿವಿಸಿ ರೆಸಿನ್ ಉತ್ಪಾದನೆಯಲ್ಲಿ ಎರಡನೇ ದೊಡ್ಡ ಘಟಕ. ಪುಣೆಯಲ್ಲಿರುವ ನಮ್ಮ ಆಧುನಿಕ ಉತ್ಪಾದನೆಯ ಘಟಕವು ಇದರ ಪ್ರಧಾನ ಕಾರ್ಯಲಯವಾಗಿದ್ದು, ಮಹಾರಾಷ್ಟ್ರದ ರತ್ನಗಿರಿ ಹಾಗೂ ಗುಜರಾತಿನ ಮಸರ್ ನಲ್ಲೂ ಉತ್ಪಾದನಾ ಘಟಕಗಳಿವೆ.ಚೆಂಚ್ ವಾಡ್, ಕಟಕ್, ದೆಹಲಿ ಹಾಗೂ ಇಂದೋರ್ ನಲ್ಲಿರುವ ನಮ್ಮ ಗೋದಾಮುಗಳಿಂದ ನಾವು ವಿತರಣೆಯ ಕಾರ್ಯವನ್ನು ನೆರವೇರಿಸುತ್ತೇವೆ.

ಎಫ್ ಐಎಲ್, ಪಿವಿಸಿ-ಯು ಪೈಪ್ ಉತ್ಪಾದನೆಗೆ ನೀಡಲಾಗುವ IS/ISO 9001:2008 ಪ್ರಮಾಣಪತ್ರವನ್ನು ಪಡೆದ ಭಾರತದ ಪ್ರಥಮ ಉತ್ಪಾದನಾ ಸಂಸ್ಥೆಯಾಗಿದೆ. ಭವಿಷ್ಯದಲ್ಲಿ ಆದಷ್ಟು ಬೇಗ 1 ಬಿಲಿಯಾನ್ ಯು ಎಸ್ ಡಿ ಕಂಪೆನಿಯಾಗುವ ನಮ್ಮ ಗುರಿಯನ್ನು ತಲುಪಲು ನಾವು ನಿರಂತರವಾಗಿ ನಮ್ಮ ಉತ್ಪಾದನೆಯ ಗುಣಮಟ್ಟ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ.

ಪಿವಿಸಿ-ಯು ಪೈಪ್ ಘಟಕ :

ಪುಣೆ, ರತ್ನಗಿರಿ ಹಾಗೂ ಮಸರ್ ನಲ್ಲಿರುವ ನಮ್ಮ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಉತ್ಪಾದನಾ ಘಟಕಗಳು 2,50,000 ಎಮ್.

ಫಿನೋಲೆಕ್ಸ್ ಪಿವಿಸಿ ಪೈಪ್ಸ್ ಹಾಗೂ ಫಿಟ್ಟಿಂಗ್ ಗಳು ಹಲವಾರು ಗಾತ್ರ, ಪ್ರೆಶರ್ ಕ್ಲಾಸೆಸ್ ಹಾಗೂ ವ್ಯಾಸಗಳಲ್ಲಿ, ಉಪಲಬ್ಧವಿದ್ದು, ಕೃಷಿಗೆ ಹಾಗೂ ಕೃಷಿಯೇತರ ವೈವಿಧ್ಯಮಯ ಬಳಕೆಗಳಾದ ವಸತಿ (ಹೌಸಿಂಗ್), ಕೈಗಾರಿಕೆ ಹಾಗೂ ನಿರ್ಮಾಣದ ಕಾರ್ಯಗಳಿಗೆ ಗೆ ಹೊಂದಿಕೊಳ್ಳಲು ಸಹಾಯಕವಾಗಿವೆ.

ನಮ್ಮ 15,000 ಪ್ರತ್ಯಕ್ಷ ಹಾಗೂ ಪರೋಕ್ಷವಾದ ರಿಟೇಲ್ ಮಳಿಗೆಗಳ ಮೂಲಕ ಉತ್ತಮ ಗುಣಮಟ್ಟದ ಪಿವಿಸಿ – ಯು ಹಾಗೂ ಸಿಪಿವಿಸಿ ಪೈಪ್ಸ್ ಹಾಗೂ ಫಿಟ್ಟಿಂಗ್ಸ್ ಗಳನ್ನು ದೇಶದಾದ್ಯಂತ ಒದಗಿಸುತ್ತೇವೆ.

ಪಿವಿಸಿ ರೆಸಿನ್ ಘಟಕ:

ಪೈಪ್ ಗಳಿಗೆ ಬೇಕಾಗುವ ಮುಖ್ಯ ವಸ್ತು ಪಿವಿಸಿ ಸುಮಾರು 650 ಎಕರೆಗಳಷ್ಟು ಭೂಮಿಯಲ್ಲಿ ಹಬ್ಬಿರುವ ರತ್ನಗಿರಿಯ ನಮ್ಮ ಘಟಕದಲ್ಲಿ ನಾವು ರೆಸಿನ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆವು. Hoechst ನ ಟೆಕ್ನೋಲೋಜಿಯೊಂದಿಗೆ ಜರ್ಮನಿಯ Uhde GmbH, ನ ಟೆಕ್ನಿಕಲ್ ಸಹಯೋಗದಿಂದ ನಾವು ಈ ಘಟಕವನ್ನು ಪ್ರಾರಂಭಿಸಿದೆವು. ಈ ಘಟಕ ಸಸ್ಪೆಂಶನ್ ಹಾಗೂ ಎಮಲ್ಷನ್ ಎರಡು ವಿಧದ ಪಿವಿಸಿಯನ್ನು ಉತ್ಪಾದಿಸುತ್ತದೆ ಹಾಗೂ ನಮ್ಮ ವಾರ್ಷಿಕ ಉತ್ಪಾದನೆಯು 2,72,000 ಎಮ್.ಟಿ.ಪಿ.ಎ ಯಷ್ಟು ತಲುಪಿದೆ.

ಪಿವಿಸಿ ಪೈಪ್ ತಯಾರಿಕೆ, ಕೇಬಲ್ಗಳು ನಿರೋಧಕ, ಕಿಟಕಿ ಪ್ರೋಫೈಲ್ಗಳು, ಫ್ಲೋರಿಂಗ್, ಬ್ಲಿಸ್ಟರ್ ಪ್ಯಾಕೇಜಿಂಗ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಅನ್ವಯಿಕೆಗಳನ್ನು ಕಂಡುಕೊಳ್ಳುತ್ತದೆ. ಪ್ರಕೃತಿ ಬಹುಮುಖಿಯಾಗಿ, ಪಿವಿಸಿ ನಿರಂತರವಾಗಿ ಪ್ರತಿ ದಿನವೂ ಹೊಸ ಅಪ್ಲಿಕೇಶನ್ಗಳನ್ನು ಕಂಡುಕೊಳ್ಳುತ್ತದೆ.

ಪಿವಿಸಿ ಕಾಂಪ್ಲೆಕ್ಸ್ ನ ಭಾಗವಾಗಿ ಎಫ್ಐಎಲ್, ಭಾರತದ ಖಾಸಗೀ ಕೈಗಾರಿಕಾ ವಲಯದಲ್ಲೇ ಪ್ರಥಮವಾಗಿ ಸಮುದ್ರದಲ್ಲಿ ಕ್ರಯೋಜೆನಿಕ್ ಜೆಟ್ಟಿಯನ್ನು ಸ್ಥಾಪಿಸಿದೆ.

 

 • ಲೀಡರ್ಶಿಪ್ ತಂಡ
  ಲೀಡರ್ಶಿಪ್ ತಂಡ

  ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸುವ ನಮ್ಮ ನಾಯಕತ್ವ ತಂಡವನ್ನು ತಿಳಿದುಕೊಳ್ಳಿ

 • ಪ್ರಶಸ್ತಿಗಳು
  ಪ್ರಶಸ್ತಿಗಳು

  ಅದರ ಅಸಾಧಾರಣ ಸಾಧನೆಗಾಗಿ, ಫಿನಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ

 • ಇತಿಹಾಸ
  ಇತಿಹಾಸ

  ಫಿನೊಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಪುಣೆನಲ್ಲಿ ಉತ್ಪಾದನಾ ಸ್ಥಾವರದೊಂದಿಗೆ ಸಂಯೋಜಿಸಲಾಯಿತು.

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.